ಕೆ.ಆರ್.ಪುರ :ಮರದ ದಿಂಬಿಗಳು ತುಂಬಿದ ಲಾರಿ ನಂ. TN-70 R 0085 ಸಂಖ್ಯೆಯ ವಾಹನ ರಸ್ತೆಯ ಗುಂಡಿಗೆ ಸಿಲುಕಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಹೊಸಕೋಟೆ ರಸ್ತೆಯ ಭಟ್ಟರಹಳ್ಳಿಯ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾದ ಪರಿಣಾಮ, ತುಂಬಿದ ಬೃಹತ್ ಮರದ ತುಂಡುಗಳು ರಸ್ತೆಗೆ ಬಿದ್ದು ಮತ್ತೊಂದು ಅವಾಂತರವಾಗಿದೆ.
ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕೆಆರ್ ಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.