*ಬೆಂಗಳೂರಿನ ದೊಡ್ಡ ಆಲದ ಮರ - ವಿಶ್ವ ದಾಖಲೆಗೆ ಸೇರ್ಪಡೆ*

Jagruthi Times Kannada
0


*ಜಾಗೃತಿ ಟೈಮ್ಸ್ ಸುದ್ದಿ*

ಬೆಂಗಳೂರು, ಪಾರಂಪರಿಕ ವೃಕ್ಷ ತಾಣವೆಂದು ಹೆಸರಾಗಿರುವ ವಿಶ್ವ ವಿಖ್ಯಾತ " ದೊಡ್ಡ ಆಲದ ಮರ  ತನ್ನ ಗಾತ್ರಕ್ಕೆ ವಿಶ್ವ ದಾಖಲೆ ಪಟ್ಟಿಯಲ್ಲಿ ಸ್ಥಾನ " ಪಡೆದುಕೊಂಡಿದೆ. 

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ ೩ ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವೆ ಈ ದೊಡ್ಡ ಆಲದ ಮರ. 

ಸುಮಾರು ೪೦೦ ವರ್ಷಗಳಷ್ಟು ವಯಸ್ಸಾಗಿದೆ.  ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನವನ್ನು ಹೊಂದಿದೆ. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳನ್ನು ಕಾಣಬಹುದು. 

ಬೆಂಗಳೂರಿನಲ್ಲಿರುವ ಈ ಆಲದ ಮರದ ಎತ್ತರ ೯೫ ಅಡಿ, ಇನ್ನೂ ಕೊಂಬೆಗಳು ದೈತ್ಯವಾಗಿ ನಾಲ್ಕು ೩ ಎಕರೆಯಲ್ಲಿ ಆವರಿಸಿದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ.

ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳು ಇವೆ.  ೨೦೦೦ರದಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಟ್ಟಿವೆ. ಇದು ದೇವರ ಪವಾಡ ಎಂಬುದು ಇಲ್ಲಿನವರ ನಂಬಿಕೆ. 

ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವೆಂದು ಸಾರಿದೆ. ಕೇಂದ್ರ ಸರ್ಕಾರಕ್ಕೂ ಪ್ರದೇಶವನ್ನು ಸರ್ವತೋಮುಖ ಅಭಿವೃದ್ಧಿಗೆ ಪರಿಗಣಿಸಬೇಕೆಂದು ಶಿಫಾರಸು ಮಾಡಿದೆ. ಕುಡಿಯುವ ನೀರಿನ ವ್ಯವಸ್ಥೆಯಿದೆ. 

ಬೃಹದಾಕಾರವಾಗಿ  ಬೆಳೆದು ನಿಂತಿರುವ ಈ ಮರವು ಕಪಿಗಳು, ಪಾರಿವಾಳಗಳು, ಚಿಟ್ಟೆಗಳು ಸೇರಿದಂತೆ ಅನೇಕ ಪ್ರಾಣಿ- ಪಕ್ಷಿಗಳಿಗೆ ಆಶ್ರಯದ ತಾಣವಾಗಿದೆ.  ಈ ಅಪರೂಪದ ಮರವನ್ನು ನೋಡಲು ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!