ಜಾಗೃತಿ ಟೈಮ್ಸ್ ಸುದ್ದಿ
ಮಹದೇವಪುರ:- ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂ.ನಗರ ಜಿಲ್ಲಾಧ್ಯಕ್ಷರಾದ ಎಂ. ಪ್ರಕಾಶ್ ಮೂರ್ತಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೆಳ್ಳಂದೂರು ಕಾರ್ಡಿನ ಕರಿಯಮ್ಮನ ಅಗ್ರಹಾರದ ಪಟೇಲ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹದೇವಪುರ ಕನ್ನಡ ಸಾಹಿತ್ಯ ಪರಿಷತ್ತಿನವತಿಯಿಂದ ಆಯೋಜಿಸಿದ ವಿದ್ಯಾಲಯದಿಂದ ವಿದ್ಯಾಲಯಗಳಿಗೆ ಕನ್ನಡ ಅಭಿಯಾನದಡಿಯಲ್ಲಿ ರಾಜ್ಯ ಮಟ್ಟದ ಕವ್ಯ ಕಮ್ಮಟದಲ್ಲಿ ಭಾಗಿಯಾಗಿ ಮಾತನಾಡಿದರು.
ಸಂಸ್ಕೃತಿ ಚಿಂತಕರಾದ ಯೋಗನಂದ ಬಾಬು, ಡಾ.ವೆ. ಅಜಿತ್ ಕುಮಾರ್, ಸಾಹಿತಿ ಡಾ. ಸತ್ಯಮಂಗಲ ಮಹಾದೇವ, ಕ್ಷೇತ್ರಾಧ್ಯಕ್ಷ ಟಿ. ವೀರಭದ್ರಪ್ಪ, ಪಟೇಲ್ ಸಂಸ್ಥೆಯ ಮುಖ್ಯಸ್ಥ ಆರ್. ಸಂಪತ್ ಕುಮಾರ್, ಸಾಹಿತಿ ಉಪೇಂದ್ರ ಕುಮಾರ್, ಕನ್ನಡ ಭಕ್ತ ಕಿರಣ್ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.