ಬೆಂಗಳೂರು ನಗರದಲ್ಲಿ ಜನತೆ ಬೆಚ್ಚಿ ಬೀಳುವಂತ ಘಟನೆ ನಡೆದಿದೆ. ಅಸ್ಸಾಂ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದು ಇದೀಗ ಕೊಲೆಯ ಪ್ರಮುಖ ಆರೋಪಿ ಆಕೆಯ ಪ್ರಿಯತಮ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಬಳಿಕ ಪ್ರಿಯತಮ ಒಂದು ದಿನ ಪ್ರೇಯಸಿಯ ಶವದ ಜೊತೆಯೇ ಕಾಲ ಕಳೆದಿದ್ದ ಎನ್ನುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಅಸ್ಸಾಂ ಮೂಲಕ ಯುವತಿ ಮಾಯಾ ಗೊಗೊಯ್ ಶನಿವಾರ ಗೆಳೆಯನ ಜೊತೆ ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್ನ ಲಾಬಿಗೆ ಪ್ರವೇಶಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ. ಅವರು ಅಪಾರ್ಟ್ಮೆಂಟ್ಗೆ ಪ್ರವೇಶಿಸುವಾಗ ನಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಮೂರು ದಿನಗಳ ಬಳಿಕ ಪೊಲೀಸರು ಆಕೆಯ ಶವವನ್ನು ಅಪಾರ್ಟ್ನಲ್ಲಿ ವಶಕ್ಕೆ ಪಡೆದಿದ್ದಾರೆ. ಗೆಳೆಯನೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ನವೆಂಬರ್ 23ರಂದು ತನ್ನ ಗೆಳೆಯ ಗೆಳೆಯ ಆರವ್ ಹರ್ನಿಯೊಂದಿಗೆ ಮಾಯಾ ಗೊಗೊಯ್ ಬುಕ್ ಮಾಡಿದ್ದ ಸರ್ವೀಸ್ ಅಪಾರ್ಟ್ಮೆಂಟ್ ಬುಕ್ ಮಾಡಿದ್ದರು. ಅದೇ ಅಪಾರ್ಟ್ಮೆಂಟ್ನಲ್ಲಿ ಕೊಳೆತ ದೇಹ ಪತ್ತೆಯಾಗಿದೆ.
ಅಪಾರ್ಟ್ಮೆಂಟ್ನಲ್ಲೇ ಕೊಲೆ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರವ್ ಹರ್ನಿ ಸೋಮವಾರ ಗೊಗೊಯ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮಂಗಳವಾರ ಮನೆಯಿಂದ ಹೊರಬಂದಿದ್ದಾರೆ. ಒಂದು ಇಡೀ ದಿನ ಅವರು ಗೆಳತಿಯ ಶವದ ಜೊತೆ ಕಾಲ ಕಳೆದಿದ್ದಾರೆ. ಫೋಟೋಗಳಲ್ಲಿ ಕೋಣೆಯಲ್ಲಿ ಕಂಬಳಿ ಮತ್ತು ದಿಂಬುಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದೆ. ನವೆಂಬರ್ 23 ಮತ್ತು 26 ರ ನಡುವೆ ಯಾವುದೇ ವ್ಯಕ್ತಿ ಸರ್ವೀಸ್ ಅಪಾರ್ಟ್ಮೆಂಟ್ಗೆ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿಲ್ಲ.
ಆರವ್ ಹರ್ನಿ ಬಾಡಿಗೆ ಕೊಠಡಿಯಿಂದ ಹೊರಬಂದ ಬಳಿಕ ಶವ ಪತ್ತೆಯಾಗಿದೆ. ಕೂಡಲೇ ಪೊಲೀಸರು ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಮಾಯಾ ಗೊಗೊಯ್ ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಚ್ಎಸ್ಆರ್ ಲೇಔಟ್ನಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು ಎಂದು ಐಎಎನ್ಎಸ್ ವರದಿ ತಿಳಿಸಿದೆ.
ಆರವ್ ಹರ್ನಿ ಶವದೊಂದಿಗೆ ಒಂದು ದಿನ ಉಳಿದುಕೊಂಡಿದ್ದರಿಂದ, ಆರವ್ ಹರ್ನಿ ದೇಹವನ್ನು ತುಂಡುಗಳಾಗಿ ಕತ್ತರಿಸಿ ಬೇರೆಡೆ ಎಸೆಯಲು ಯೋಜಿಸಿದ್ದನಾ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.