ಕರ್ಣಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರು ಇಂದು ಬೆಳಗಿನ ಜಾವ 2.45ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅವರು 92 ವರ್ಷ ವಯಸ್ಸಿನವರು. 1999 ರಿಂದ 2004ರವರೆಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅವರು, ನಂತರ ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದರು. 2009-2012ರ ಅವಧಿಯಲ್ಲಿ ಅವರು ವಿದೇಶಾಂಗ ಸಚಿವರಾಗಿದ್ದರು. ಕರ್ನಾಟಕ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದು, ಅಂತ್ಯಕ್ರಿಯೆ ರಾಜ್ಯ ಗೌರವಗಳೊಂದಿಗೆ ಡಿಸೆಂಬರ್ 11ರಂದು ನಡೆಯಲಿದೆ.
ಮಾಜಿ ಮುಖ್ಯ ಮಂತ್ರಿ ಎಸ್ಎಂ ಕೃಷ್ಣ ಇನ್ನಿಲ್ಲ
ಡಿಸೆಂಬರ್ 09, 2024
0