ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಹನುಮಂತ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ರಿಯಾಲಿಟಿ ಶೋನಲ್ಲಿ ಗೆದ್ದ ಬಳಿಕ ಸಾಕಷ್ಟು ಆಫರ್‌ಗಳು ಹನುಮಂತನನ್ನು ಹುಡುಕಿಕೊಂಡು ಬರುತ್ತಿವೆ. ಹಾಗಾದರೆ ಹನುಮಂತನ ಮುಂದಿನ ನಡೆ ಏನು? ಸಿನಿಮಾದಲ್ಲಿ ನಟಿಸುತ್ತಾರಾ ಹನುಮಂತ? ಇದೆಲ್ಲದಕ್ಕೂ ಉತ್ತರ ಇಲ್ಲಿದೆ.
ಬಿಗ್ ಬಾಸ್ ನಲ್ಲಿ ಗೆದ್ದ ಮೇಲೆ ಹನುಮಂತನಿಗೆ ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳು ಬರುತ್ತಿವೆ. ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಹನುಮಂತ ಅವರು ನಟಿಸಲು ಆಫರ್‌ಗಳು ಬಂದಿವೆ. ಆದರೆ ಹನುಮಂತ ಈ ಆಫರ್‌ಗಳನ್ನು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು.. ಹನುಮಂತ ಸಿನಿಮಾ ಸಹವಾಸವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಗಂಟೆಗಟ್ಟೆಲೆ ಕಾಯುವಿಕೆ, ಮೇಕಪ್, ತಳುಕು ಬಳಕು, ಬಣ್ಣದ ಜಗತ್ತಿನಿಂದ ದೂರ ಇರಲು ಹನುಮಂತ ಬಯಸಿದ್ದಾರೆ ಎನ್ನಲಾಗುತ್ತಿದೆ. ಬದಲಾಗಿದೆ ತಮ್ಮನ್ನು ರಾಜ್ಯದಲ್ಲಿ ಈ ಮಟ್ಟಕ್ಕೆ ಗುರುತಿಸಿಕೊಳ್ಳುವಂತೆ ಮಾಡಿದ ರಿಯಾಲಿಟಿ ಶೋಗಳನ್ನು ಮಾಡಲು ಹನುಮಂತ ಬಯಸಿದ್ದಾರೆ. ಹೀಗಾಗು ಒಂದಾದ ಮೇಲೆ ಒಂದು ರಿಯಾಲಿಟಿ ಶೋ ಮಾಡುತ್ತಿರುವ ಹನುಮಂತ ರಿಯಾಲಿಟಿ ಶೋ ಮೂಲಕವೇ ಜನರ ಪ್ರೀತಿ ಗಳಿಸುವ ಗುರಿಯನ್ನು ಹೊಂದಿದ್ದಾರೆ.
ಎಲ್ಲಿಗೆ ಬಂತು ಹನುಮಂತನ ಮದುವೆ ವಿಚಾರ?
ಹನುಮಂತ ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ಮದುವೆ ಆಗಬೇಕು, ಮನೆ ಕಟ್ಟಬೇಕು ಅನ್ನೋ ಕನಸನ್ನು ಹೊಂದಿದ್ದಾರೆ. ಅವರ ಕನಸಿನಂತೆ ಫ್ಯಾಮಿಲಿ ಕಡೆಗೆ ಗಮನ ಕೊಡುತ್ತಿದ್ದಾರೆ. ಹೀಗಾಗಿ ಸಿನಿಮಾ ಆಫರ್‌ಗಳು ಬಂದರೂ ಕೂಡ ಹನುಮಂತ ಡೋಂಟ್ ಕೇರ್ ಎನ್ನುತ್ತಿದ್ದಾರೆ.