ಪೋಷಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಮೊದಲ ತರಗತಿಗೆ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ
ಬೆಂಗಳೂರು: ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿದ್ದು, ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಬುಧವಾರ (ಏ. 16) ನಿರ್ಧಾರ ಪ್ರಕಟಿಸಿದೆ.
ಹೌದು ರಾಜ್ಯ ಸರ್ಕಾರವು ಪೋಷಕರು, ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, 1 ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯವಲ್ಲ, 5 ವರ್ಷ 6 ತಿಂಗಳು ತುಂಬಿದ್ರೆ 1 ನೇ ತರಗತಿಗೆ ಪ್ರವೇಶ ನೀಡುವುದಾಗಿ ಘೋಷಿಸಿದೆ.
ಈ ಮೂಲಕ ಮಕ್ಕಳ ವಯೋಮಿತಿ ಬಗ್ಗೆ ಟೆನ್ನನ್ ನಲ್ಲಿದ್ದವರಿಗೆ ಬಿಗ್ ರಿಲೀಫ್ ನೀಡಿದೆ. ಈ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿ ಪ್ರವೇಶಕ್ಕೆ ಜೂ.1ಕ್ಕೆ ಆರು ವರ್ಷ ತುಂಬಿರ ಬೇಕು ಎಂಬ ವಯೋಮಿತಿ ನಿಗದಿ ಮಾಡಿರುವುದನ್ನು ಸಡಿಲಿಕೆ ಮಾಡುವಂತೆ ಪಾಲಕರು ಒತ್ತಾಯಿಸಿದ್ದರು. ಇದಕ್ಕೆ ಮಣಿದ ಸರ್ಕಾರವು ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.